Tuesday, 31 January 2017

ಶ್ರೀ ಜ್ಞಾನ

ಶ್ರೀನಿವಾಸ್ ಹೆಚ್ ಎನ್

ಸಾಮಾನ್ಯ ವಿಜ್ಞಾನ.


1) ವಿಜ್ಞಾನದ ಪಿತಾಮಹ ಯಾರು?
- ರೋಜರ್ ಬೇಕನ್.


2) ಇರುವೆ ಕಚ್ಚಿದಾಗ ಬಿಡುಗಡೆಯಾಗುವ ಆಮ್ಲ ಯಾವುದು?
 * ಫಾರ್ಮಿಕ್ ಆಮ್ಲ.

3) ಮೊಟ್ಟ ಮೊದಲ ಕ್ಲೋನಿಂಗ್ ಸಸ್ತನಿ ಯಾವುದು?
 * ಡಾಲಿ (ಕುರಿ).

4) ಕಂಚು ---- & ---- ಒಳಗೊಂಡಿರುತ್ತದೆ.
 * ತಾಮ್ರ & ತವರ.

5) ಓಝೋನ್ ನ ಅಣುಸೂತ್ರವೇನು?
 * ಒ3.

6) ಕಾರಿನ ಬ್ಯಾಟರಿಯಲ್ಲಿರುವ ಆಮ್ಲ ಯಾವುದು?
 * ಸಲ್ಪ್ಯೂರಿಕ್ ಆಮ್ಲ.

7) ಭೂಮಿಯ ಮೇಲೆ ವೇಗವಾಗಿ ಓಡುವ ಪ್ರಾಣಿ ಯಾವುದು?
 * ಚಿರತೆ/ಚಿತಾ.

8) ಪ್ಲಾಟಿಪಸ್ & ಎಕಿಡ್ನ್ ಇವು -----.
 * ಮೊಟ್ಟೆ ಇಡುವ ಸಸ್ತನಿಗಳು.

9) ನಗಿಸುವ ಅನಿಲ ಯಾವುದು?
 * ನೈಟ್ರಸ್ ಆಕ್ಸೈಡ್.

10) ಅಡುಗೆ ಉಪ್ಪಿನಲ್ಲಿ ಕಂಡು ಬರುವ ಬಂಧ ಯಾವುದು?
 * ಎಲೆಕ್ಟ್ರೊ ವೆಲೆಂಟ್.

11) ಡೊಲೊಮೈಟ್ ಎನ್ನುವುದು -----.
 * ಕ್ಯಾಲ್ಸಿಯಂನ ಅದಿರು.

12) ಗರಿಷ್ಠ ಪ್ರಮಾಣದ ಪ್ರೋಟಿನ್ ಹೊಂದಿರುವ ಆಹಾರ ಯಾವುದು?
 * ನೆಲಗಡಲೆ.

13)  ಹಸಿರು ಹಣ್ಣು ಮಾಗಿಸಲು ಬಳಸುವ ರಾಸಾಯನಿಕ ಯಾವುದು?
 * ಈಥಲೀನ್.

14) ಅತಿ ಹೆಚ್ಚಿನ ಸಕ್ಕರೆ ಅಂಶ ಹೊಂದಿರುವ ಕಾರ್ಬೋಹೈಡ್ರೇಟ್ ಯಾವುದು?
* ಫ್ರಕ್ಟೋಸ್.

15) ಕಿಣ್ವಗಳು ------- ಗಳಾಗಿರುತ್ತವೆ?
* ಪ್ರೋಟಿನ್.

16) ಆಂಶಿಕ ಭಟ್ಟಿ ಇಳಿಸುವಿಕೆಯ ಮೊದಲ ಉತ್ಪನ್ನ ಯಾವುದು?
* ಪೆಟ್ರೋಲಿಯಂ ಈಥರ್.

17) ಇಂಗಾಲದ ಬಹು ರೂಪಗಳು ----&-----.
 * ವಜ್ರ & ಗ್ರಾಫೈಟ್.

18) ಆಧುನಿಕ ತಳಿಶಾಸ್ತ್ರದ ಪಿತಾಮಹ ಯಾರು?
 * ಗ್ರೆಗೇರ್ ಮಂಡಲ್.

19) ಲಿಕ್ಕರ್ ಗಳಲ್ಲಿ ----- ಆಲ್ಕೋಹಾಲ್ ಇರುತ್ತದೆ.
* ಈಥೈಲ್.

20) ಟಂಗ್ ಸ್ಟನ್ ನ ಸಂಕೇತವೇನು?
* W.

By RBS

21) ಸಸ್ಯಗಳಲ್ಲಿ ಆಹಾರವನ್ನು ಸಾಗಿಸುವ ಅಂಗಾಂಶ ಯಾವುದು?
 * ಫ್ಲೋಯಂ.

22) ಶಬ್ದದ ವೇಗವು ಗರಿಷ್ಠವಾಗಿರುವುದು ----ದಲ್ಲಿ.
* ಘನ.

23) ಕ್ಯಾಮರದಲ್ಲಿ ಬಳಸುವ ಮಸೂರ ಯಾವುದು?
* ಪೀನ.

24) ಜೂಲ್, ಕ್ಯಾಲೋರಿಗಳು ----- ಮಾನಗಳು.
 * ಶಕ್ತಿಯ.

25)  ಜೂನ್ 5 ರ ವಿಶೇಷವೇನು?
 * ವಿಶ್ವ ಪರಿಸರ ದಿನ.

26) ಆಮ್ಲ ಮಳೆಗೆ ---- & ---- ಕಾರಣಗಳು.
* ನೈಟ್ರೋಜನ್ ಆಕ್ಸೈಡ್ & ಸಲ್ಪರ್ ಡೈ ಆಕ್ಸೈಡ್.

27) ಮಾರ್ಸ್ ಗ್ಯಾಸ್ ಎಂದು ಯಾವದನ್ನು ಕರೆಯುತ್ತಾರೆ?
* ಮೀಥೆನ್.

28) ಅಯಸ್ಕಾಂತ ತಯಾರಿಸಲು ಬಳಸುವ ಮಿಶ್ರಲೋಹ ಯಾವುದು?
 * ಆಲ್ನಿಕೋ.

29) ಉಕ್ಕಿನಲ್ಲಿರುವ ಮೂಲವಸ್ತುಗಳು ಯಾವುವು?
* ಕಬ್ಬಿಣ & ಇಂಗಾಲ.

30) ಚರಂಡಿ ನೀರಿನಲ್ಲಿರುವ ಕ್ರಮಿನಾಶಕವಾಗಿ ಬಳಸುವ ಅನಿಲಗಳು ಯಾವುವು?
* ಓಜೋನ್ & ಕ್ಲೋರಿನ್.

31) ಅನುವಂಶಿಯವಾದ ಮಂಡಿಸಿದವರು ಯಾರು?
* ಗ್ರೆಗರ್ ಮೆಂಡಲ್.

32) ಭಾರಜಲವನ್ನು ------ ಎನ್ನುವರು?
 * ಡ್ಯೂಟೇರಿಯಂ.

33) ಹಳದಿ ಕೇಕ್ ಎಂದು ಯಾವದನ್ನು ಕರೆಯುತ್ತಾರೆ?
 * ಯುರೇನಿಯಂ.

34) ಅಡುಗೆ ಸೋಡಾದ ರಾಸಾಯನಿಕ ಹೆಸರೇನು?
* ಸೋಡಿಯಂ ಬೈ ಕಾರ್ಬೋನೇಟ್.

35) ಕಾಗೆ ಬಂಗಾರ ಎಂದು ಯಾವದನ್ನು ಕರೆಯುತ್ತಾರೆ?
 * ಮೈಕಾ (ಅಭ್ರಕ).

36) ಎಲ್ಲಾ ಆಮ್ಲಗಳ ಮೂಲವಸ್ತು ಯಾವುದು?
* ಜಲಜನಕ.

37) ಎಕ್ಸ್ ರೇ ಕಂಡು ಹಿಡಿದವರು ಯಾರು?
* ವಿಲಿಯಂ ರಾಂಟೆಜನ್.

38) ಸಿಟಿಸ್ಕ್ಯಾನ್ ನಲ್ಲಿ ---- ಬಳಸುತ್ತಾರೆ?
* ಎಕ್ಸ್ ರೇ.

39) ಕೋಲಾ ತಂಪು ಪಾನಿಯದಲ್ಲಿರುವುದು -----&------.
 * ಕಾಫೈನ್ & ಕೋಕೈನ್.

40) ಕೋಲಾ ತಂಪು ಪಾನೀಯ ಕಂಪನಿಯು ಯಾವ ಮೂಲದ್ದು?(ರಾಷ್ಟ್ರ)
* ಯುಎಸ್.

By RBS

41) ರಾಷ್ಟ್ರೀಯ ವಿಜ್ಞಾನ ದಿನ ಯಾವಾಗ ಆಚರಿಸಲಾಗುತ್ತದೆ?
* ಫೆಬ್ರವರಿ 28.

42) ಸರ್ ಸಿ.ವಿ ರಾಮನ್ ರ ಜನ್ಮಸ್ಥಳ ಯಾವುದು?
* ತಮಿಳುನಾಡಿನ ತಿರುಚನಾಪಳ್ಳಿ ತಿರುವನೈಕಾವಲ್.

43) ಸಿ.ವಿ.ರಾಮನ್ ರವರಿಗೆ ನೊಬೆಲ್ ಪ್ರಶಸ್ತಿ ದೊರೆತದ್ದು ಯಾವಾಗ?
 * 1930.

44) 2015, ಫೆಬ್ರವರಿ 28 ವಿಜ್ಞಾನ ದಿನದ ಘೋಷವಾಕ್ಯವೇನು?
* ರಾಷ್ಟ್ರ ನಿರ್ಮಾಣಕ್ಕೆ ವಿಜ್ಞಾನ.

45) ಜೇನುತುಪ್ಪ ------- ಒಳಗೊಂಡಿರುತ್ತದೆ?
* ಫ್ರಕ್ಟೋಸ್.

46) ಬ್ರೇಕ್ ಬೋನ್ ಫೀವರ್ ಎಂದು ಕರೆಯಲ್ಪಡುವ ರೋಗ ಯಾವುದು?
* ಡೆಂಗ್ಯೂ ಜ್ವರ.

47) ಘನಗಳ ರಚನೆಯನ್ನು ಪತ್ತೆ ಹಚ್ಚಲು ಬಳಸುವುದು ಯಾವದನ್ನು?
* ಕ್ಷ ಕಿರಣ.

48)  ಅತಿದೊಡ್ಡ ಅಕಶೇರುಕ ಯಾವುದು?
* ದೈತ್ಯ ಸ್ವಿಡ್.

49) ಮನುಷ್ಯನಲ್ಲಿ ಪತ್ತೆ ಹಚ್ಚಲಾದ ವಿಕಿರಣ ವಸ್ತು ಯಾವುದು?
 * ಪೋಟಾಸಿಯಂ-40.

50) ಕಕ್ಷೆಗೆ ಕಳುಹಿಸಿದ ಮೊದಲ ಪ್ರಾಣಿ ಯಾವುದು?
* ನಾಯಿ.

51) ಮಾನವನ ಕಣ್ಣು ಬೆಳಗಿನ ವೇಳೆ ಯಾವ ಬಣ್ಣಕ್ಕೆ ತೀವ್ರ ತೀಕ್ಷ್ಣವಾಗಿರುತ್ತದೆ?
* ಹಸಿರು.










ಜಾಗತಿಕ ಇತಿಹಾಸ.


1) ಹಿಸ್ಟರಿ ಎಂಬ ಪದವು ಗ್ರೀಕ್ ಪದವಾದ ---- ಎಂಬ ಮೂಲದಿಂದ ಬಂದಿದ್ದು?
 * ಹಿಸ್ಟೋರಿಯಾ.

2) "ದಿ ಹಿಸ್ಟರಿ ಆಫ್ ಪರ್ಷಿಯನ್ ವಾರ್ಸ್" ಕೃತಿಯ ಕರ್ತೃ ಯಾರು?
 * ಹೆರೊಡೋಟಸ್.

3) "ದ ಸಿಟಿ ಆಫ್ ಗಾಡ್" ಕೃತಿಯ ಕರ್ತೃ ಯಾರು?
 * ಸಂತ ಆಗಸ್ಟೈನ್.

4) "ಇತಿಹಾಸವೆಂದರೆ ಉಳ್ಳವರು ಮತ್ತು ಇಲ್ಲದವರ ನಡುವಿನ ಸಂಘರ್ಷ" ಎಂದವರು ಯಾರು?
 * ಕಾರ್ಲಮಾರ್ಕ್ಸ್.

5) "ಎ ಸ್ಟಡಿ ಆಫ್ ಹಿಸ್ಟರಿ" ಕೃತಿಯ ಕರ್ತೃ ಯಾರು?
 * ಆರ್ನಾಲ್ಡ್ ಟಾಯ್ನ್ ಬಿ.

6) "ಡಿಸ್ಕವರಿ ಆಫ್ ಇಂಡಿಯಾ" ಕೃತಿಯ ಕರ್ತೃ ಯಾರು?
 * ಜವಾಹರ್ ಲಾಲ್ ನೆಹರು.

 7) "ಇತಿಹಾಸನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರು" ಎಂದವರು ಯಾರು?
 * ಡಾ.ಬಿ.ಆರ್.ಅಂಬೇಡ್ಕರ್.

8) ಮಾನವ ಶಬ್ದವು ಲ್ಯಾಟಿನ್ ಭಾಷೆಯ ------ ನಿಂದ ಉತ್ಪತ್ತಿಯಾಗಿದೆ?
 * ಹ್ಯೂಮನಸ್.

9) "ದಿ ಒರಿಜಿನ್ ಆಫ್ ದಿ ಸ್ಪೀಶೀಸ್" ಕೃತಿಯ ಕರ್ತೃ ಯಾರು?
 * ಚಾರ್ಲ್ಸ್ ಡಾರ್ವಿನ್.

10) ಇಂಗ್ಲೀಷಿನ ಸಿವಿಲಿಜೇಶನ್ ಎಂಬ ಪದವು ಲ್ಯಾಟಿನ್ ನ ಯಾವ ಪದದಿಂದ ಬಂದಿದೆ?
 * ಸಿವ್ಹಿಲಿಸ್.

11) ಬಹುಶ ಜಗತ್ತಿನ ಮೊದಲ ನಾಗರಿಕತೆ ಈಜಿಫ್ಟ್ ದೇಶದ ಯಾವ ನದಿಯ ತೀರದಲ್ಲಿ ಬೆಳೆಯಿತು?
 * ನೈಲ್.

12) ನೈಲ್ ನದಿಯ ವರಪ್ರಸಾದ ಯಾವುದು?
 * ಈಜಿಪ್ಟ್.

13) ಈಜಿಪ್ಟ್ ನ ರಾಜರನ್ನು -----ಗಳೆಂದು ಕರೆಯಲಾಗುತ್ತಿತ್ತು?
 * ಫೆರೋ.

14) ಜಗತ್ತಿನ ಮೊಟ್ಟ ಮೊದಲ ರಾಣಿಯಿಂದ ಆಳಲ್ಪಟ್ಟ ದೇಶವೆಂಬ ಹೆಗ್ಗಳಿಕೆಗೆ ಯಾವ ನಾಗರಿಕತೆ ಪಾತ್ರವಾಗಿದೆ?
 * ಈಜಿಪ್ಟ್ ನಾಗರಿಕತೆ.

15) ಈಜಿಪ್ತಿಯನ್ನರ ಬರೆವಣಿಗೆಯನ್ನು ---- ಎಂದು ಕರೆಯುತ್ತಾರೆ?
 * ಹೈರೋಗ್ಲಿಫ್.

16) ಗೀಝಾ ಪಿರಿಮಿಡ್ ಯಾವ ಸಾಮ್ರಾಟನ ಗೋರಿಯಾಗಿದೆ?
 * ಖುಫುವಿನ.

17) ಯಾವುದನ್ನು "ನಾಗರಿಕತೆಗಳ ತೊಟ್ಟಿಲು ಮತ್ತು ಸಮಾಧಿ" ಎಂದು ಕರೆಯುತ್ತಾರೆ?
 * ಮೆಸೊಪೊಟೋಮಿಯಾ.

18) ಯಾರನ್ನು ಮೆಸಪೊಟೋಮಿಯಾ ನಾಗರಿಕತೆಯ ಹರಿಕಾರರು ಎನ್ನುವರು?
 * ಸುಮೇರಿಯನ್ನರು.

19) "ತೂಗು ಉದ್ಯಾನ" ವನ್ನು ನಿರ್ಮಿಸಿದವನು ಯಾರು?
 * ನೆಬುಖಡ್ನೆಜರ್.

20) ಹಮ್ಮುರಾಬಿ ------ ದ ರಾಜನಾಗಿದ್ದನು.
 * ಬೆಬಿಲೋನಿಯಾ.

21) ಹಮ್ಮುರಾಬಿಯ ಕಾನೂನು ಸಂಹಿತೆಯಲ್ಲಿ ಎಷ್ಟು ಕಾನೂನುಗಳಿವೆ?
 * 282.
By RBS

22) ಜಗ್ಗುರಾತಗಳು ಎಂದರೆ -----.
 * ಎತ್ತರದ ಶಿಖರವುಳ್ಳ ದೇವಾಲಯ.

23) ಚೀನಿಯರು ಯಾರಿಂದ ಹತ್ತಿ ಬೆಳೆಯುವುದನ್ನು ಕಲಿತರು?
 * ಭಾರತೀಯರಿಂದ.

24) ಲಾವೋತ್ಸೆ ಯಾವ ದೇಶದ ತತ್ವಜ್ಞಾನಿ?
 * ಚೀನಾ.

25) ಯಾರ ತತ್ವಜ್ಞಾನವನ್ನು "ಕನ್ ಫ್ಯೂಸಿಯನಿಸಂ" ಎಂದು ಕರೆಯುತ್ತಾರೆ?
 * ಕನ್ಫೂಷಿಯಸ್.

26) ಪುರೂರವನನ್ನು ಅಲೆಕ್ಸಾಂಡರ್ ಯಾವ ಕದನದಲ್ಲಿ ಸೋಲಿಸಿದನು?
 * ಹೈಡಸ್ ಪೆಸ್.

27) ಹೈಡಸ್ ಪೆಸ್ ಕದನದ ಇನ್ನೊಂದು ಹೆಸರೇನು?
 * ಜೇಲಂ.

28) ಜೇಲಂ ಅಥವಾ ಹೈಡಸ್ ಪೆಸ್ ಕದನವಾದದ್ದು ಯಾವಾಗ?
 * ಸಾ.ಶ.ಪೂ.326 ರಲ್ಲಿ.

29) ವೈದ್ಯಶಾಸ್ತ್ರದ ಪಿತಾಮಹ ಯಾರು?
 * ಹಿಪೊಕ್ರೇಟಿಸ್.

30) ಅಂಗ ರಚನಾಶಾಸ್ತ್ರದ ಪಿತಾಮಹ ಯಾರು?
 * ಹೆರೋಫಿಲಸ್.

31) ಪ್ರಾಚೀನ ಭಾರತದಲ್ಲಿ "ಗಾಂಧಾರ ಕಲೆ" ಯಾರ ಪ್ರಭಾವದಿಂದ ಉದಯಿಸಿತು?
 * ಗ್ರೀಕ್.

32) ಸಾಕ್ರೆಟಿಸನ ಪ್ರಮುಖ ಶಿಷ್ಯ ಯಾರು?
 * ಪ್ಲೇಟೋ.

33) ಅಥೆನ್ಸ್ ನಲ್ಲಿ ಅಕಾಡೆಮಿ ಸ್ಥಾಪಿಸಿದವನು ಯಾರು?
 * ಪ್ಲೇಟೋ.

34) "ದ ಲಾಸ್" ಕೃತಿಯ ಕರ್ತೃ ಯಾರು?
 * ಪ್ಲೇಟೋ.

35) "ಮಾನವ ಸಮಾಜ ಜೀವಿ" ಎಂದವನು ಯಾರು?
 * ಅರಿಸ್ಟಾಟಲ್.

36) ತತ್ವಶಾಸ್ತ್ರದ ಪಿತಾಮಹ ಯಾರು?
 * ಅರಿಸ್ಟಾಟಲ್.

37) "ಹಿಸ್ಟರಿ ಆಫ್ ಅನಿಮಲ್ಸ್" ಕೃತಿಯ ಕರ್ತೃ ಯಾರು?
 * ಅರಿಸ್ಟಾಟಲ್.

38) "ಡಯಲಾಗ್ಸ್" ಕೃತಿಯ ಕರ್ತೃ ಯಾರು?
 * ಪ್ಲೇಟೋ.

39) ರಾಜಶಾಸ್ತ್ರದ ಪಿತಾಮಹ ಯಾರು?
 * ಅರಿಸ್ಟಾಟಲ್.

40) "ದ ಪೊಲಿಟಿಕ್ಸ್" ಕೃತಿಯ ಕರ್ತೃ ಯಾರು?
 * ಅರಿಸ್ಟಾಟಲ್.

41) "ರಿಪಬ್ಲಿಕ್" ಕೃತಿಯ ಕರ್ತೃ ಯಾರು?
 * ಪ್ಲೇಟೋ.


ರಾಜ್ಯಶಾಸ್ತ್ರ.


1) ಮೂರು ದುಂಡು ಮೇಜಿನ ಸಮ್ಮೇಳನದಲ್ಲಿ ಭಾಗವಹಿಸಿದವರು ಯಾರು?
 * ಡಾ.ಬಿ.ಆರ್.ಅಂಬೇಡ್ಕರ್.

2) ಕೇಂದ್ರ ಹಾಗೂ ರಾಜ್ಯಗಳ ನಡುವೆ ಅಧಿಕಾರ ಹಂಚಿಕೆಯನ್ನು ಸಂವಿಧಾನದ ಯಾವ ಅನುಸೂಚಿಯಲ್ಲಿ ಸೂಚಿಸಲಾಗಿದೆ?
 * 7 ನೇ.

3) ಪ್ರಸ್ತಾವನೆಯಲ್ಲಿರುವ ಗಣರಾಜ್ಯ,ಸ್ವಾತಂತ್ರ್ಯ,ಸಮಾನತೆ,ಭ್ರಾತೃತ್ವ ಎಂಬ ಪದವನ್ನು ಯಾವ ಕ್ರಾಂತಿಯಿಂದ ಪಡೆಯಲಾಗಿದೆ?
 * ಫ್ರಾನ್ಸ್ ಕ್ರಾಂತಿ (1789).

4) ಜಾತ್ಯತೀತ ಎಂಬ ಪದವನ್ನು ಯಾವ ತಿದ್ದುಪಡಿಯ ಮೂಲಕ ಪ್ರಸ್ತಾವನೆಯಲ್ಲಿ ಸೇರಿಸಲಾಯಿತು?
 * 42 ನೇ (1976).

5) ಉದ್ಯೋಗ ಪಡೆಯುವಲ್ಲಿ ಎಲ್ಲರಿಗೂ ಸಮಾನತೆ ನೀಡುವ ಸಂವಿಧಾನದ ವಿಧಿ ಯಾವುದು?
 * 16.

6) ಭಾರತದಲ್ಲಿ "ಸುಖಿರಾಜ್ಯ" ದ ಕಲ್ಪನೆಯನ್ನು ಮೂಡಿಸಲು ------ ಗಳನ್ನು ಭಾರತದ ಸಂವಿಧಾನದಲ್ಲಿ ಸೇರಿಸಲಾಗಿದೆ.
 * ರಾಜ್ಯ ನಿರ್ದೇಶಕ ತತ್ವ.

7) ಸುಪ್ರೀಂಕೋರ್ಟ್ ನ್ನು ಕಲ್ಕತ್ತಾದಲ್ಲಿ ಯಾವಾಗ ಸ್ಥಾಪಿಸಲಾಯಿತು?
 * ಮಾರ್ಚ್ 26, 1774 ರಲ್ಲಿ.

8) ಭಾರತದ ಮೊಟ್ಟ ಮೊದಲ ವೈಸರಾಯ್ ಆಗಿ ನೇಮಕಗೊಂಡವರು ಯಾರು?
 * ಲಾರ್ಡ್ ಕ್ಯಾನಿಂಗ್.

9) ಯಾರನ್ನು "Father of Communal Electrorate" ಎನ್ನುವರು.
 * ಲಾರ್ಡ್ ಮಿಂಟೋ.

10) 1919 ರ ಮಾಂಟೆಗೊ ಚೇಮ್ಸ್ ಫರ್ಡ್ ಕಾಯ್ದೆ ಪ್ರಕಾರ ಯಾವ ಪದ್ದತಿ ಜಾರಿಗೆ ಬಂದಿತು.
 * ದ್ವಿಸರ್ಕಾರ.

11) ಲಾಲಾ ಲಜಪತ್ ರಾಯ್ ಸ್ಥಾಪಿಸಿದ ಸಂಘಟನೆ ಯಾವುದು?
 * ಸರ್ವೇಂಟ್ಸ್ ಆಫ್ ದಿ ಪೀಪಲ್ ಸೊಸೈಟಿ.

12) ರಾಷ್ಟ್ರಪತಿ ಚುನಾವಣಾ ವಿಧಾನವನ್ನು ಯಾವ ಸಂವಿಧಾನದಿಂದ ಎರವಲು ಪಡೆಯಲಾಗಿದೆ?
 * ಐರಿಷ್.

13) ಸಂವಿಧಾನ ರಚನಾ ಸಭೆಯಲ್ಲಿದ್ದ ಏಕೈಕ ಮುಸ್ಲಿಂ ಮಹಿಳೆ ಯಾರು?
 * ಕುದ್ಸಿಯಾ ಅಜುಲ್ಲಾ ರಸುಲ್ಲಾ.

14) ಭಾರತದ ಉಕ್ಕಿನ ಮನುಷ್ಯ ಎಂದು ಖ್ಯಾತರಾದವರು ಯಾರು?
 * ಸರ್ದಾರ್ ವಲ್ಲಭಭಾಯ್ ಪಾಟೇಲ್.

15) ಅಪರೇಶನ್ ಪೊಲೋದಲ್ಲಿ ಭಾರತದ ಸೇನೆಯ ನೇತೃತ್ವ ವಹಿಸಿದ್ದವರು ಯಾರು?
 * ಮೇ// ಜಿಯಾಂಟೊನಾಥ್ ಚೌದರಿ.

16) ರಾಜ್ಯ ಪುನರ್ ರಚನಾ ಆಯೋಗದ ಅಧ್ಯಕ್ಷರು ಯಾರಾಗಿದ್ದರು?
 * ಫಜಲ್ ಅಲಿ.

17) ಭಾರತದ 2011 ರ ಜನಗಣತಿಯಂತೆ ಜನಸಾಂದ್ರತೆಯಲ್ಲಿ ಮೊದಲ ಸ್ಥಾನದಲ್ಲಿರುವ ರಾಜ್ಯ ಯಾವುದು?
 * ಬಿಹಾರ.

18) ಭಾರತದ 2011 ರ ಜನಗಣತಿಯಂತೆ ಜನಸಾಂದ್ರತೆಯಲ್ಲಿ ಕೊನೆಯ ಸ್ಥಾನದಲ್ಲಿರುವ ರಾಜ್ಯ ಯಾವುದು?
 * ಅರುಣಾಚಲಪ್ರದೇಶ.

19) ಜೆ.ವಿ.ಪಿ ಸಮಿತಿಯನ್ನು ಯಾವಾಗ ರಚಿಸಲಾಯಿತು?
 * 1948, ಡಿಸೆಂಬರ್

20) ನಾಗಾಲ್ಯಾಂಡ್ ಎಷ್ಟನೇ ರಾಜ್ಯವಾಗಿ 1962 ರಲ್ಲಿ ರಚಿತವಾಯಿತು?
 * 16 ನೇ.
By RBS

21) 1953 ರ ಅಕ್ಟೋಬರ್ 1 ರಂದು ಆಂಧ್ರಪ್ರದೇಶ ಪ್ರತ್ಯೇಕ ರಾಜ್ಯವಾದಾಗ ಅದರ ರಾಜಧಾನಿ ಯಾವುದಾಗಿತ್ತು?
 * ಕರ್ನೂಲ್.

22) ಭಾರತದ ಏಕಪೌರತ್ವ ಪದ್ದತಿಯನ್ನು ಯಾವ ಸಂವಿಧಾನದಿಂದ ಎರವಲು ಪಡೆಯಲಾಗಿದೆ?
 * ಬ್ರಿಟನ್.

23) ದ್ವಿ ಪೌರತ್ವ ಹೊಂದಿರುವ ಎರಡು ರಾಷ್ಟ್ರಗಳನ್ನು ಹೆಸರಿಸಿರಿ?
 * ಅಮೇರಿಕಾ & ಸ್ವಿಟ್ಜರ್ಲ್ಯಾಂಡ್.

24) ಭಾರತದ ಮೂಲಭೂತ ಹಕ್ಕುಗಳು ಲಿಖಿತವಾಗಿ ಇರುವದರಿಂದ -------- ಎನ್ನುತ್ತಾರೆ.
 * ಭಾರತದ ಮ್ಯಾಗ್ನಾಕಾರ್ಟ್.

25) ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು ಎಲ್ಲಿ ಮಾಡಿತು?
 * ಪ್ಯಾರಿಸ್.

26) ಕೇಂದ್ರ ಸರ್ಕಾರ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಮಸೂದೆಯನ್ನು ಯಾವಾಗ ಜಾರಿಗೆ ತರಲಾಯಿತು?
 * 2008 ರಲ್ಲಿ.

27) ಕೋಕಾ (KCOCA) ವಿವರಿಸಿರಿ?
 * Karnataka Control of Organized Crime Act.

28) ಬಾಲಕಾರ್ಮಿಕರ ಬಗ್ಗೆ ಅಧ್ಯಯನ ಮಾಡಲು 1979 ರಲ್ಲಿ ನೇಮಕ ಮಾಡಲಾದ ಮೊಟ್ಟ ಮೊದಲ ಸಮಿತಿ ಯಾವುದು?
 * ಗುರುಪಾದಪ್ಪ ಸ್ವಾಮಿ.

29) 14 ವರ್ಷದ ಒಳಗಿನ ಮಕ್ಕಳನ್ನು ಅಪಾಯಕಾರಿ ಚಟುವಟಿಕೆಗಳಲ್ಲಿ ತೊಡಗುವದನ್ನು ಸಂವಿಧಾನದ ಯಾವ ವಿಧಿ ನಿಷೇಧಿಸುತ್ತದೆ?
 * 24 ನೇ ವಿಧಿ.

30) ಭಾರತ ಸಂವಿಧಾನದ 32 ನೇ ವಿಧಿಯನ್ನು ಸಂವಿಧಾನದ ಆತ್ಮ ಮತ್ತು ಹೃದಯ ಎಂದು ವರ್ಣಿಸಿದವರು ಯಾರು?
 * ಡಾ.ಬಿ.ಆರ್.ಅಂಬೇಡ್ಕರ್.

31) ಕನಿಷ್ಟ ಕೂಲಿ ಕಾಯ್ದೆ ಜಾರಿಗೆ ಬಂದದ್ದು ಯಾವಾಗ?
 * 1948 ರಲ್ಲಿ.

32) ಸಮಾನ ವೇತನ ಕಾಯ್ದೆ ಜಾರಿಗೆ ಬಂದದ್ದು ಯಾವಾಗ?
 * 1976 ರಲ್ಲಿ.

33) ಬಾಲಕಾರ್ಮಿಕ ನಿಷೇಧ ಹಾಗೂ ನಿಯಂತ್ರಣ ಕಾಯ್ದೆ ಜಾರಿಗೆ ಬಂದದ್ದು ಯಾವಾಗ?
 * 1986 ರಲ್ಲಿ.

34) ಜೀತ ಪದ್ದತಿ ನಿರ್ಮೂಲನ ಕಾಯ್ದೆ ಜಾರಿಗೆ ಬಂದದ್ದು ಯಾವಾಗ?
 * 1976 ರಲ್ಲಿ.

35) ಟ್ರೆಡ್ ಯೂನಿಯನ್ ಕಾಯ್ದೆ ಜಾರಿಗೆ ಬಂದದ್ದು ಯಾವಾಗ?
 * 1926 ರಲ್ಲಿ.

36) ಕೈಗಾರಿಕಾ ವಿವಾದ ಕಾಯ್ದೆ ಜಾರಿಗೆ ಬಂದದ್ದು ಯಾವಾಗ?
 * 1947 ರಲ್ಲಿ.

37) 1990-1991 ನ್ನು ಯಾವ ವರ್ಷವೆಂದು ಆಚರಿಸಲಾಗುತ್ತದೆ?
 * ಸಾಮಾಜಿಕ ನ್ಯಾಯ ವರ್ಷ.

38) ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ವೃದ್ಧಿಗೊಳಿಸಲು ಅನುವು ನೀಡಿದ ಸಂವಿಧಾನದ ವಿಧಿ ಯಾವುದು?
 * ವಿಧಿ 51.

39) "ಅಸ್ಪೃಶ್ಯತಾ ನಿಷೇಧ ಕಾಯ್ದೆ"ಯನ್ನು ಯಾವಾಗ ರೂಪಿಸಲಾಯಿತು?
 * 1955 ರಲ್ಲಿ.

40) ಭಾರತ ಸಂವಿಧಾನದ ಎಷ್ಟರಿಂದ ಎಷ್ಟನೇ ವಿಧಿಯವರೆಗೆ ರಾಜ್ಯ ನಿರ್ದೇಶಕ ತತ್ವಗಳ ಬಗ್ಗೆ ತಿಳಿಸುತ್ತವೆ?
 * 36-51.

41) ಗಣಿ ಕಾಯ್ದೆ ಜಾರಿಗೆ ಬಂದದ್ದು ಯಾವಾಗ?
 * 1952 ರಲ್ಲಿ.










ಭೂಗೋಳಶಾಸ್ತ್ರ.

1) ಏಷ್ಯಾದ ಅತ್ಯಂತ ಕೆಳಮಟ್ಟದ ಬಿಂದು ಯಾವುದು?
 * ಮೃತ ಸಮುದ್ರ.

2) ಪ್ರಪಂಚದ ಭೂಖಂಡಗಳಲ್ಲಿ ದೊಡ್ಡದು ಯಾವುದು?
 * ಏಷ್ಯಾ.

3) ಏಷ್ಯಾ ಖಂಡದಲ್ಲಿರುವ ರಾಷ್ಟ್ರಗಳ ಸಂಖ್ಯೆ ಎಷ್ಟು?
 * 48.

4) ಏಷ್ಯ ಮತ್ತು ಆಫ್ರಿಕಾ ಖಂಡಗಳ ಗಡಿಯು ಸಾಮಾನ್ಯವಾಗಿ ಯಾವ ಕಾಲುವೆಯ ಮುಖಾಂತರ ಹಾಯ್ದು ಹೋಗುತ್ತದೆ?
 * ಸೂಯೇಜ್ ಕಾಲುವೆ.

5) "ವೈಪರೀತ್ಯಗಳ ಖಂಡ" ಎಂದು ಯಾವ ಖಂಡವನ್ನು ಕರೆಯುತ್ತಾರೆ?
 * ಏಷ್ಯಾ.

6) ಪ್ರಪಂಚದಲ್ಲೇ ಅತಿಹೆಚ್ಚು ಮಳೆ ಪಡೆಯುವ ರಾಜ್ಯ ಯಾವುದು?
 * ಮಾಸಿನ್ ರಾಮ್. (ಮೇಘಾಲಯ).

7) "ಮಾಸಿನ್ ರಾಮ್" ಅತಿಹೆಚ್ಚು ಮಳೆ ಅಂದರೆ ಎಷ್ಟು ಸೆಂ.ಮೀ ಪಡೆಯುತ್ತದೆ?
 * 1187 ಸೆಂ.ಮೀ.

8) ಏಷ್ಯಾ ಖಂಡದ ಒಟ್ಟು ಭೌಗೋಳಿಕ ವಿಸ್ತಿರ್ಣ ಸುಮಾರು ----- ಮಿಲಿಯನ್ ಚ.ಕಿ.ಮೀ.ಗಳು?
 * 44.

9) ಪ್ರಪಂಚದ ಮೇಲ್ಮೈ ವಿಸ್ತಿರ್ಣದಲ್ಲಿ ಏಷ್ಯಾ ಖಂಡ ----- ಭಾಗದಷ್ಟಾಗಿದೆ?
 * ಶೇ.33.

10) ಯುರೋಪ್ ಮತ್ತು ಏಷ್ಯಗಳನ್ನು ಒಟ್ಟುಗೂಡಿಸಿ ----- ಎನ್ನುವರು?
 * ಯೂರೆಷ್ಯ.

11) ಏಷ್ಯಾ ಖಂಡವು ಮೂರು ಕಡೆ ------ & ಒಂದು ಕಡೆ ------- ಭಾಗದಿಂದಾವರಿಸಿದೆ?
 * ಸಾಗರಗಳು & ಭೂಭಾಗ.

12) ಏಷ್ಯಾ ಖಂಡದ ಉತ್ತರಕ್ಕೆ ಯಾವ ಸಾಗರವಿದೆ?
 * ಆಕ್ಟಿರ್ಕ್.

13) ಏಷ್ಯಾ ಖಂಡದ ಪೂರ್ವ ಭಾಗದಲ್ಲಿ ಯಾವ ಸಾಗರವಿದೆ?
 * ಪೆಸಿಫಿಕ್.

14) ಏಷ್ಯಾ ಖಂಡದ ದಕ್ಷಿಣದಲ್ಲಿ ಯಾವ ಸಾಗರವಿದೆ?
 * ಹಿಂದೂ ಮಹಾಸಾಗರ.

15) ಏಷ್ಯಾ ಖಂಡದ ಪಶ್ಚಿಮಕ್ಕೆ ಯಾವ ಖಂಡವಿದೆ?
 * ಯುರೋಪ್.

16) ಬಾಕ್ಸೈಟ್ ------ ಲೋಹ.
 * ಕಬ್ಬಿಣೇತರ.

17) ಪ್ರಪಂಚದಲ್ಲಿ ಅತಿಹೆಚ್ಚು ಕಲ್ಲಿದ್ದಲು ನಿಕ್ಷೇಪ ಹೊಂದಿರುವ ರಾಷ್ಟ್ರ ಯಾವುದು?
 * ಚೀನಾ.

18) ಕ್ಷೇತ್ರ ಮತ್ತು ಜನಸಂಖ್ಯೆ ಎರಡರಲ್ಲೂ ಏಷ್ಯಾದ ಚಿಕ್ಕದೇಶ ಯಾವುದು?
 * ಮಾಲ್ಡೀವ್ಸ್.

19) "ಮಂಚೂರಿಯ" ಕೈಗಾರಿಕಾ ಪ್ರದೇಶ ಯಾವ ದೇಶದಲ್ಲಿದೆ?
 * ಚೀನಾ.

20) ಪ್ರಪಂಚದಲ್ಲೇ ಅತಿಹೆಚ್ಚು "ಪೆಟ್ರೋಲಿಯಂ" ಉತ್ಪಾದಿಸುವ ದೇಶ ಯಾವುದು?
 * ಸೌದಿ ಅರೇಬಿಯ.

21) ಏಷ್ಯಾ ಖಂಡದಲ್ಲಿ ಸುಮಾರು ----- ಬಿಲಿಯನ್ ಜನಸಂಖ್ಯೆಯಿದೆ?
 * 4.2.

22) ಪ್ರಮುಖ ಕೈಗಾರಿಕೆ ಮತ್ತು ಕೈಗಾರಿಕಾ ಚಟುವಟಿಕೆಗಳನ್ನುಳ್ಳ ಪ್ರದೇಶಕ್ಕೆ -------- ಎನ್ನುವರು.
 * ಕೈಗಾರಿಕಾ ಪ್ರದೇಶ.

23) "ಕಹೀನ್" ಕೈಗಾರಿಕಾ ಪ್ರದೇಶವು ಯಾವ ದೇಶದಲ್ಲಿದೆ?
 * ಜಪಾನ್.

24) ಹೂಗ್ಲಿ : ಕೊಲ್ಕತ್ತಾ ಪ್ರದೇಶ :: ಮುಂಬಯಿ : ------.
 * ಪುಣೆ ಪ್ರದೇಶ.

25) ಪ್ರಪಂಚದ ಅತಿ ಎತ್ತರವಾದ ಪ್ರಸ್ಥಭೂಮಿ ಯಾವುದು?
 * ಟಿಬೆಟ್.
By RBS

26) ಪ್ರಪಂಚದ ಅತ್ಯಂತ ವಿಶಾಲವಾದ ಒಳನಾಡಿನ ಜಲರಾಶಿ ಯಾವುದು?
 * ಕ್ಯಾಸ್ಪಿಯನ್ ಸಮುದ್ರ.

27) Petra ಎಂದರೆ ------.
 * ಕಲ್ಲು.

28) Oleum ಎಂದರೆ -----.
 * ತೈಲ.

29) "ವುಹಾನ್" ಕೈಗಾರಿಕಾ ಪ್ರದೇಶ ಯಾವ ರಾಷ್ಟ್ರದಲ್ಲಿದೆ?
 * ಚೀನಾ.

30) ಪ್ರಪಂಚದಲ್ಲೇ ಆಳವಾದ ಸರೋವರ ಯಾವುದು?
 * ಬೈಕಲ್ ಸರೋವರ.

31) "ಬೈಕಲ್ ಸರೋವರ" ಎಲ್ಲಿದೆ?
 * ದಕ್ಷಿಣ ಸೈಬೀರಿಯಾ.

32) "ಪ್ರಪಂಚದ ಮೇಲ್ಚಾವಣೆ" ಎಂದು ಯಾವುದನ್ನು ಕರೆಯಲಾಗಿದೆ?
 * ಟಿಬೆಟ್.

33) ಏಷ್ಯಾ ಖಂಡದ ಅತ್ಯಂತ ಎತ್ತರವಾದ ಬಿಂದು ಯಾವುದು?
 * ಮೌಂಟ್ ಎವರೆಸ್ಟ್.

34) ಮೌಂಟ್ ಎವರೆಸ್ಟ್ ನ ಎತ್ತರವೇಷ್ಟು?
 * 8848 ಮೀ.

35) ಪ್ರಪಂಚದಲ್ಲೇ ಹೆಚ್ಚಿನ ಸಂಖ್ಯೆಯ ಹಿಮನದಿಗಳು ಯಾವ ಪರ್ವತ ಸರಣಿಗಳಲ್ಲಿವೆ?
 * ಕಾರಾಕೊರಂ.

36) "ಹಾನ್ಶಿನ್" ಕೈಗಾರಿಕಾ ಪ್ರದೇಶ ಯಾವ ದೇಶದಲ್ಲಿದೆ?
 * ಜಪಾನ್.

37) ಪೆಟ್ರೋಲಿಯಂ ಶಬ್ದ ಯಾವ ಭಾಷೆಯ ಎರಡು ಪದಗಳಿಂದ ಸಂಯೋಜಿತವಾದದ್ದು?
 * ಲ್ಯಾಟಿನ್.

38) ಸಮಶೀತೋಷ್ಣ ವಲಯದ ಹುಲ್ಲುಗಾವಲನ್ನು ------- ಎನ್ನುವರು?
 * ಸ್ಟೆಪ್ಪಿ.

39) ಟಂಡ್ರ ಸಸ್ಯವರ್ಗವು ಯಾವ ಕರಾವಳಿಯ ಉದ್ದಕ್ಕೂ ಕಿರಿದಾದ ಭಾಗದಲ್ಲಿ ಕಂಡು ಬರುತ್ತದೆ?
 * ಆಕ್ಟಿರ್ಕ್.

40) ಏಷ್ಯಾ ಖಂಡದಲ್ಲಿ ಯಾವ ಮಾರುತಗಳಿಂದ ಬೇಸಿಗೆಯಲ್ಲಿ ಹೆಚ್ಚು ಮಳೆಯಾಗುತ್ತದೆ?
 * ನೈರುತ್ಯ ಮಾನ್ಸೂನ್.

41) ಏಷ್ಯಾದ ಜನರ ಪ್ರಮುಖ ವೃತ್ತಿ ಯಾವುದು?
 * ವ್ಯವಸಾಯ.

42) ಚೀನಾದ ನೈರುತ್ಯಕ್ಕೆ ಯಾವ ಪ್ರಸ್ಥಭೂಮಿಯಿದೆ?
 * ಯುನ್ನಾನ್.

43) "ಶಾನ್ ಪ್ರಸ್ಥಭೂಮಿ" ಯಾವ ರಾಷ್ಟ್ರದಲ್ಲಿದೆ?
 * ಮಯನ್ಮಾರ್.

44) ದಕ್ಷಿಣ ಏಷ್ಯಾದಲ್ಲಿಯೇ ಅತಿದೊಡ್ಡ ದೇಶ ಯಾವುದು?
 * ಭಾರತ.

45) "ಅಮುರ್" ನದಿ ಯಾವ ದೇಶದಲ್ಲಿ ಕಂಡು ಬರುವುದು?
 * ರಷ್ಯಾ.

46) "ಹ್ಯಾಂಗ್ ಹೊ" ನದಿ ಯಾವ ದೇಶದಲ್ಲಿ ಕಂಡು ಬರುವುದು?
 * ಚೀನಾ.

47) ಏಷ್ಯಾದ ಪ್ರಮುಖ ಆಹಾರ ಬೆಳೆಗಳು ಯಾವು?
 * ಭತ್ತ ಮತ್ತು ಗೋಧಿ.

48) ಏಷ್ಯಾ ಖಂಡದಲ್ಲಿಯೇ ಭತ್ತ ಉತ್ಪಾದಿಸುವ ಪ್ರಮುಖ ದೇಶಗಳು ಯಾವು?
 * ಚೀನಾ ಮತ್ತು ಭಾರತ.

49) ಪ್ರಪಂಚದಲ್ಲಿ ಎರಡನೆಯ ಪ್ರಮುಖ ಕಬ್ಬು ಉತ್ಪಾದಿಸುವ ರಾಷ್ಟ್ರ ಯಾವುದು?
 * ಭಾರತ.

50) "ಚಾಂಗ್ ಜಿಯಾಂಗ್" ಕೈಗಾರಿಕಾ ಪ್ರದೇಶ ಯಾವ ದೇಶದಲ್ಲಿದೆ?
 * ಚೀನಾ.

51) "ಐಸೆ ಕೊಲ್ಲಿ" ಕೈಗಾರಿಕಾ ಪ್ರದೇಶವು ಯಾವ ದೇಶದಲ್ಲಿದೆ?
 * ಜಪಾನ್.




ಸ್ಪರ್ಧಾ ವಿಜೇತ ( ಜನವರಿ 2016).


1) ಅಮೇರಿಕಾದ ಕೇಂದ್ರ ಬ್ಯಾಂಕ್ "ಫೆಡರಲ್ ರಿಸರ್ವ್ ಬ್ಯಾಂಕ್ ನ ಕೇಂದ್ರ ಕಚೇರಿ ಎಲ್ಲಿದೆ?
 * ವಾಷಿಂಗ್ಟನ್ ಡಿ.ಸಿ.

2) 2015 ರ ಪದ್ಮಶ್ರೀ ಪಡೆದ ವಿಕಲಚೇತನ ಮಹಿಳೆ ಯಾರು?
 * ಆರುಣಿಮಾ ಸಿನ್ಹಾ.

3) ಕರ್ನಾಟಕದ ಪ್ರಸ್ತುತ ವಿಧಾನಸಭಾ ಕ್ಷೇತ್ರಗಳು ಎಷ್ಟು?
 * 224 ( +1) 225.

4) ಟಿ.ಆರ್.ಜಿಲಿಯಾಂಗ್ ಯಾವ ರಾಜ್ಯದ ಮುಖ್ಯಮಂತ್ರಿ?
 * ನಾಗಾಲ್ಯಾಂಡ್.

5) ಚೀನಾ ಮೂಲದ ಅಮೇರಿಕನ್ ಸ್ಟಾರ್ಟಪ್ ಕಂಪನಿ "ನೆಕ್ಟ್ರ್ ಇವಿ" ಯ ಸಿಇಒ ಆಗಿ ನೇಮಕಗೊಂಡು ಭಾರತೀಯರು ಯಾರು?
 * ಪದ್ಮಶ್ರೀ ವಾರಿಯರ್.

6) 'ಅಮಿತಾಬ್ ಕಾಂತ್' ನೀತಿ ಆಯೋಗದ ಎಷ್ಟನೇ ಸಿಇಒ?
 * 2 ನೇ.

7) ಪ್ರಸ್ತುತ ಜಾರ್ಖಂಡ ದ ರಾಜ್ಯಪಾಲರು ಯಾರು?
 * ದ್ರೌಪದಿ ಮುರ್ಮಾ.

8) ಅಫ್ಘ್ಹಾನಿಸ್ತಾನದ ಸಂಸತ್ ಭವನ ಉದ್ಘಾಟಿಸಿದವರು ಯಾರು?
 * ನರೇಂದ್ರ ಮೋದಿ.

9) ನಿರ್ಮಾಣವಾಗುತ್ತಿರುವ ಜಗತ್ತಿನ ಅತಿ ಎತ್ತರವಾದ ಕಟ್ಟಡ ಯಾವುದು?
 * ಕಿಂಗ್ಡಂ ಟವರ್.

10) "ಕಿಂಗ್ಡಂ ಟವರ್" ಯಾವ ದೇಶದಲ್ಲಿ ನಿರ್ಮಾಣವಾಗುತ್ತಿದೆ?
 * ಸೌಧಿ ಅರೇಬಿಯಾ.

11) ಈ ಬಾರಿಯ ಆಸ್ಕರ್ ರೇಸ್ ನಲ್ಲಿದ್ದ ಕನ್ನಡದ ಎರಡು ಚಲನಚಿತ್ರಗಳು ಯಾವುವು?
 * ರಂಗಿತರಂಗಿ & ಕೇರ್ ಆಪ್ ಫುಟ್ ಪಾತ್.

12) ನೂತನ ಕೇಂದ್ರ ಮಾಹಿತಿ ಹಕ್ಕು ಆಯೋಗದ ಮುಖ್ಯ ಆಯುಕ್ತರು ಯಾರು?
 * ಆರ್.ಕೆ.ಮಥೂರ್.

13) ಮಿಜೋರಾಂ ನ ಪ್ರಸ್ತುತ ಮುಖ್ಯಮಂತ್ರಿ ಯಾರು?
 * ಲಾಲ್ ಥನ್ ಹಾವ್ಲ.

14) ಸುರೇಶ್ ರೈನ್ ಐಪಿಎಲ್ 9 ರಲ್ಲಿ ಯಾವ ತಂಡದ ನಾಯಕ?
 * ರಾಜ್ ಕೋಟ್. (ಗುಜರಾತ್ ಲಾಯನ್ಸ್).

15) ಬಾಲ ನ್ಯಾಯಿಕ ಕಾಯ್ದೆ ಅಂಗೀಕಾರ ಮಾಡಿ ಇತ್ತೀಚೆಗೆ ಬಾಲಾಪರಾಧಿಗಳ ವಯಸ್ಸನ್ನು  ಎಷ್ಟಕ್ಕೆ ಇಳಿಸಲಾಗಿದೆ?
 * 16.

16) ನರೇಂದ್ರ ಮೋದಿ 2015, ಡಿಸೆಂಬರ್ 23 & 24 ರಂದು ರಷ್ಯಾಕ್ಕೆ ಎಷ್ಟು ದಿನಗಳ ಭೇಟಿ ನೀಡಿದ್ದರು?
 * 2 ದಿನ.

17) ಇತ್ತೀಚೆಗೆ ಇಸ್ರೋದಿಂದ ಸಿಂಗಾಪುರದ ಎಷ್ಟು ಉಪಗ್ರಹಗಳನ್ನು ಉಡಾವಣೆ ಮಾಡಲಾಯಿತು?
 * 6.

18) OPEC ವಿವರಿಸಿರಿ?
 * Organization of the Petroleum Exporting Countries.

19) TAPI ವಿವರಿಸಿರಿ?
 * T - ತುರ್ಕ್ ಮೆನಿಸ್ತಾನ್.
    A - ಅಫ್ಘಾನಿಸ್ಥಾನ.
    P - ಪಾಕಿಸ್ತಾನ.
    I - ಇಂಡಿಯಾ.

20) ಫೇಸ್ ಬುಕ್ ನ ಸಿಇಒ ಯಾರು?
 * ಮಾರ್ಕ್ ಜುಕರ್ ಬರ್ಗ್.
By RBS
21) ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಮೊತ್ತವೆಷ್ಟು?
 * 1 ಲಕ್ಷ ರೂ.

22) ದೇಶದಲ್ಲೇ ಮೊದಲ ಬಾರಿಗೆ ಕಡಿಮೆ ಬೆಲೆಯ ಕಾರು ತಯಾರಿಸಿದ ಕಂಪನಿ ಯಾವುದು?
 * ಮಾರುತಿ ಸುಜುಕಿ.

23) ಜ್ಞಾನಪೀಠ ಪ್ರಶಸ್ತಿಯ ಮೊತ್ತವೆಷ್ಟು?
 * 11 ಲಕ್ಷ ರೂ.

24) ಜ್ಞಾನಪೀಠ ಕನ್ನಡಕ್ಕೆ : 08 :: ಜ್ಞಾನಪೀಠ ಹಿಂದಿ ಭಾಷೆಗೆ : -------.
 * 09.

25) ಕಪ್ಪುಹಣ ವರ್ಗಾವಣೆಯ ಪ್ರಮಾಣದಲ್ಲಿ ಮೊದಲ ಸ್ಥಾನದಲ್ಲಿರುವ ರಾಷ್ಟ್ರ ಯಾವುದು?
 * ಚೀನಾ (139 ಬಿಲಿಯನ್ ಡಾಲರ್).

26) ಪ್ರಸ್ತುತವಾಗಿ ಮಾಹಿತಿ ಹಕ್ಕು ಆಯೋಗದ ಆಯುಕ್ತರುಗಳ ಸಂಖ್ಯೆ ಎಷ್ಟು?
 * 07.

27) ಡೆಂಗ್ಯೂ ಜ್ವರ ಯಾವ ಸೊಳ್ಳೆಯಿಂದ ಬರುತ್ತದೆ?
 * ಏಡಿಸ್ ಈಜಿಪ್ಟ್ ಸೊಳ್ಳೆಯಿಂದ.

28) ಪೈ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
 * ಮಾರ್ಚ್ 14.

29) ಡಿಸೆಂಬರ್ 22 ರಂದು ಯಾವ ದಿನವನ್ನಾಗಿ  ಆಚರಿಸಲಾಗುತ್ತದೆ?
 * ರಾಷ್ಟ್ರೀಯ ಗಣಿತ ದಿನ.

30) ಇತ್ತೀಚೆಗೆ ಡಿಸೆಂಬರ್ 22. 2015 ರಂದು ಶ್ರೀನಿವಾಸ ರಾಮಾನುಜಂ ಅವರ ಎಷ್ಟನೇ ಜನ್ಮ ದಿನ ಆಚರಿಸಲಾಯಿತು?
 * 128 ನೇ.

31) ಶ್ರೀನಿವಾಸ ರಾಮಾನುಜಂರವರ ಎಷ್ಟನೇ ಜನ್ಮ ವರ್ಷವನ್ನು ಕೇಂದ್ರ ಸರ್ಕಾರವು "ರಾಷ್ಟ್ರೀಯ ಗಣಿತವರ್ಷ" ಎಂದು ಕರೆದಿದೆ?
 * 125 ನೇ. (2012).

32) ಇಂದ್ರಧನುಷ್ ಅಭಿಯಾನದಲ್ಲಿ ಎಷ್ಟು ರೋಗಗಳನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸಲಾಗುವುದು?
 * 7.

33) ಹುಲಿಗಳನ್ನು ಹೆಚ್ಚು ಹೊಂದಿರುವ ಮೂರನೇ ರಾಜ್ಯ ಯಾವುದು?
 * ಮಧ್ಯಪ್ರದೇಶ (308).

34) ಫೆಬ್ರವರಿ 20, 2015 ರಂದು ಮೋದಿ ಯಾವ ಸ್ಥಳಗಳ ನಡುವೆ ರೈಲಿಗೆ ಚಾಲನೆ ನೀಡಿದರು?
 * ಅರುಣಾಚಲಪ್ರದೇಶ - ನವದೆಹಲಿ.

35) ಭಾರತ ದೇಶದ ಎರಡನೇ ಪ್ರತಿಷ್ಠಿತ ಸಾಫ್ಟವೇರ್ ಕಂಪನಿ ಯಾವುದು?
 * ಇನ್ಫೋಸಿಸ್.

36) ಇತ್ತೀಚೆಗೆ ಭೂಕಂಪದಿಂದ ತತ್ತರಿಸಿದ "ಪರ್ವತದನಾಡು" ಯಾವುದು?
 * ನೇಪಾಳ.

37) ಕಠ್ಮಂಡುವಿನಲ್ಲಿರುವ ಯಾವ ಗೋಪುರ ಇತ್ತೀಚಿನ ಭೂಕಂಪದಿಂದ ಧರೆಗುರುಳಿತು?
 * ಧರಹರ ಗೋಪುರ.

38) ಜಗತ್ತಿನಲ್ಲಿಯೇ ಗೋದಿ ಉತ್ಪಾದನೆಯಲ್ಲಿ ಭಾರತ ಯಾವ ಸ್ಥಾನದಲ್ಲಿದೆ?
 * 2 ನೇ.

39) ವಿಶ್ವದ ಅತಿದೊಡ್ಡ ಸೋಲಾರ್ ಘಟಕ ಯಾವ ರಾಜ್ಯದಲ್ಲಿ ಸ್ಥಾಪನೆಯಾಗಲಿದೆ?
 * ಮಧ್ಯಪ್ರದೇಶ.

40) ಜೂನ್ 24, 2015 ರಂದು ಎಷ್ಟು ಐಐಎಂ ಸ್ಥಾಪನೆಗೆ ಮೋದಿ ನೇತೃತ್ವದ ಸಚಿವ ಸಂಪುಟ ಅನುಮತಿ ನೀಡಿದೆ?
 * 6.

41) ವಿಯನ್ನಾ ಯಾವ ದೇಶದ ರಾಜಧಾನಿ?
 * ಆಸ್ಟ್ರಿಯಾ.




ವಿಷಯ :- ಇತಿಹಾಸ.


ಸಂಗ್ರಹ :- 6 ನೆಯ ತರಗತಿ ಸಮಾಜ ವಿಜ್ಞಾನ ಮೊದಲ ಸೆಮಿಸ್ಟರ್.

1) ಶಿವಾಜಿಯ ಪಟ್ಟಾಭಿಷೇಕವಾದದ್ದು ಯಾವಾಗ?
 * 1674 ರಲ್ಲಿ.

2) ಶಿವಾಜಿಯ ಪಟ್ಟಾಭಿಷೇಕವಾದದ್ದು ಎಲ್ಲಿ?
 * ರಾಯಗಡದಲ್ಲಿ.

3) ಯೇಸು ಕ್ರಿಸ್ತನ ಜೀವನದ ವಿವರಗಳು ಹಾಗೂ ಉಪದೇಶಗಳಿರುವುದು ಯಾವುದರಲ್ಲಿ?
 * ಬೈಬಲ್ ನಲ್ಲಿ.

4) ಯೇಸುಕ್ರಿಸ್ತ ಜನಿಸಿದ್ದು ಎಲ್ಲಿ?
 * ಬೆತ್ಲಹೆಂ ನಲ್ಲಿ.

5) 'ಬೆತ್ಲಹೆಂ' ಯಾವ ದೇಶದಲ್ಲಿದೆ?
 * ಇಸ್ರೇಲ್.

6) ಯೇಸುಕ್ರಿಸ್ತನ ತಾಯಿಯ ಹೆಸರೇನು?
 * ಮೇರಿ.

7) ಕುರಾನ್ ಯಾವ ಭಾಷೆಯಲ್ಲಿದೆ?
 * ಅರೇಬಿಕ್.

8) ಇಸ್ಲಾಂ ಪದದ ಅರ್ಥವೇನು?
 * ಶರಣಾಗತಿ ಎಂದರ್ಥ.

9) ಮುಸ್ಲಿಂ ಎಂದರೆ -----.
 * ದೇವರಿಗೆ ಶರಣರಾದವರು.

10) ಮಹಮ್ಮದ್ ರ ಉತ್ತರಾಧಿಕಾರಿಗಳನ್ನು ----- ಎನ್ನುವರು?
 * ಕಲೀಫರು.

11) ಪ್ಯಾಲೆಸ್ತೈನ್ ದ ರಾಜಧಾನಿ ಯಾವುದು?
 * ಜರೂಸಲಮ್.

12) ಹಿಜರಿ ಶಕೆಯ ----- ರಿಂದ ಪ್ರಾರಂಭ.
 *  ಕ್ರಿಶ.622.

13) "ಕಂಡರಾಯ ಮಹಾದೇವ ಮಂದಿರ" ಎಲ್ಲಿದೆ?
 * ಖಜುರಾಹೊ.

14) "ಗುಲಾಬಿ ನಗರ" ಎಂದು ಯಾವುದನ್ನು ಕರೆಯುತ್ತಾರೆ?
 * ಜೈಪುರ.

15) "ಭಾರತದ ಕೋಟೆಗಳ ಕೊರಳ ಹಾರದ ಮುತ್ತು" ಎಂದು ಯಾವ ಕೋಟೆಯನ್ನು ಕರೆಯುತ್ತಾರೆ?
 * ಗ್ವಾಲಿಯರ್ ಕೋಟೆ.

16) ರಾಜಸ್ಥಾನದಲ್ಲೇ ದೊಡ್ಡದಾದ ಅರಮನೆ ಯಾವುದು?
 * ಉದಯಪುರ ಅರಮನೆ.

17) ಪುಷ್ಕರ್ ದಲ್ಲಿ ಯಾವ ಜಾತ್ರೆ ನಡೆಯುತ್ತದೆ?
 * ಒಂಟೆ.

18) ರಜಪೂತರ ಕಾಲಾವಧಿ ತಿಳಿಸಿ?
 * ಕ್ರಿಶ 650-1200.

19) ಕನ್ನಡ ಗ್ರಂಥಗಳಲ್ಲಿ ಅತ್ಯಂತ ಪ್ರಾಚೀನವಾದದ್ದು ಯಾವುದು?
 * ಕವಿರಾಜಮಾರ್ಗ.

20) "ಕೈಲಾಸ ದೇವಾಲಯ" ಎಲ್ಲಿದೆ?
 *ಎಲ್ಲೋರ.

21) ಎಲ್ಲೋರ ಮತ್ತು ಎಲಿಪೆಂಟಾ ಯಾವ ರಾಜ್ಯದಲ್ಲಿವೆ?
 * ಮಹಾರಾಷ್ಟ್ರ.

22) ಅಮೋಘವರ್ಷ ನೃಪತುಂಗನ ತಂದೆಯ ಹೆಸರೇನು?
 * ಮುಮ್ಮಡಿ ಗೋವಿಂದ.

23) "ಹೊಯ್ಸಳರ" ವಿಶ್ವವಿಖ್ಯಾತ ದೇವಾಲಯ ಯಾವುದು?
 * ಚೆನ್ನಕೇಶವ ದೇವಾಲಯ.
By RBS
24) "ಚೆನ್ನಕೇಶವ ದೇವಾಲಯ" ಎಲ್ಲಿದೆ?
 * ಬೇಲೂರಿನಲ್ಲಿದೆ.

25) "ಕೇಶವ ದೇವಾಲಯ" ಎಲ್ಲಿದೆ?
 * ಸೋಮನಾಥಪುರ.

26) "ಗಿರಿಜಾ ಕಲ್ಯಾಣ" ಕೃತಿಯ ಕರ್ತೃ ಯಾರು?
 * ಹರಿಹರ.

27) "ಕಬ್ಬಿಗರ ಕಾವಂ" ಕೃತಿಯ ಕರ್ತೃ ಯಾರು?
 * ಆಂಡಯ್ಯ.

28) "ಬೃಹದೀಶ್ವರ ದೇವಾಲಯವು" ಯಾವ ರಾಜನ ಕೊಡುಗೆಯಾಗಿದೆ?
 * ರಾಜರಾಜಚೋಳನ.

29) ಶಿವಗುರು ಮತ್ತು ಆರ್ಯಾಂಭ ಯಾರ ತಂದೆ-ತಾಯಿ?
 * ಶಂಕರಾಚಾರ್ಯರ.

30) ಬದರಿ ಯಾವ ರಾಜ್ಯದಲ್ಲಿದೆ?
 * ಉತ್ತರಾಖಂಡ.

31) "ಚೆಲುವ ನಾರಾಯಣ ದೇವಾಲಯ" ಎಲ್ಲಿದೆ?
 * ಮೇಲುಕೋಟೆ.

32) ಬಸವೇಶ್ವರರು ಯಾವ ಜಿಲ್ಲೆಯ ಬಸವನ ಬಾಗೇವಾಡಿಯವರು?
 * ವಿಜಯಪುರ.

33) ಬಸವತತ್ವವನ್ನು ------- ಎಂದು ಕರೆಯುತ್ತಾರೆ?
 * ಶಕ್ತಿವಿಶಿಷ್ಟಾದ್ವೈತ.

34) "ದೇಹವೇ ದೇಗುಲ" ಎಂದವರು ಯಾರು?
 * ಬಸವೇಶ್ವರರು.

35) ಮದ್ವಾಚಾರ್ಯರು ಎಲ್ಲಿ ಅಷ್ಟ ಮಠಗಳನ್ನು ಸ್ಥಾಪಿಸಿದರು?
 * ಉಡುಪಿಯಲ್ಲಿ.

36) ಭಾರತದ ಮೇಲೆ ದಾಳಿ ಮಾಡಿದ ಮೊದಲಿಗರೆಂದರೆ ಯಾರು?
 * ಅರಬ್ಬರು.

37) "ಕುತುಬ್ ಮೀನಾರ್" ಯಾರ ಕಾಲದಲ್ಲಿ ಪೂರ್ಣಗೊಂಡಿತು?
 * ಇಲ್ತಮಿಶ್.

38) ದಿಲ್ಲಿಯಲ್ಲಿ ಸಿರಿ ಎಂಬ ಕೋಟೆಯನ್ನು ಕಟ್ಟಿಸಿದವನು ಯಾರು?
 * ಅಲ್ಲಾವುದ್ದೀನ್ ಖಿಲ್ಜಿ.

39) "ಅಲೈ ದರ್ವಾಜಾ" ಎಲ್ಲಿದೆ?
 * ದಿಲ್ಲಿಯಲ್ಲಿದೆ.

40) ದಿಲ್ಲಿ ಸುಲ್ತಾನರ ಕಾಲದ ಬೃಹತ್ ಉದ್ಯಮ ಯಾವುದು?
 * ನೇಯ್ಗೆ.

41) ಉರ್ದುವಿನಲ್ಲಿ "ಪದ್ಮಾವತ್" ಎಂಬ ಸೂಫಿ ಕಾವ್ಯ ಬರೆದವನು ಯಾರು?
 * ಜಯಸಿ.

42) ಕುತುಬ್ ದ್ದೀನ್ ಐಬಕ್ ನ ಕಾಲಾವಧಿ ತಿಳಿಸಿ?
 * 1206-1210.

43) ರಜಿಯಾ ಸುಲ್ತಾನಳ ಕಾಲಾವಧಿ ತಿಳಿಸಿ?
 * 1236-1240.

44) ಮೊಗಲ್ ಆಳ್ವಿಕೆ ಆರಂಭವಾದದ್ದು ಯಾವಾಗ?
 * ಕ್ರಿಶ. 1526 ರಲ್ಲಿ.

45) ಮೀನಾರು ಎಂದರೆ -----.
 * ಎತ್ತರವಾದ ಸ್ತಂಭಗೋಪುರ.

46) ದಿಲ್ಲಿ ಸುಲ್ತಾನರ ಆಳ್ವಿಕೆಯ ಅವಧಿ ತಿಳಿಸಿ?
 * ಕ್ರಿಶ 1206 - 1526.

No comments:

Post a Comment